Friday, August 12, 2022

Sarale Varasegalu- 3(ಸರಳೇ ವರಸೆಗಳು -೩)

 

Raga : Mayamalavagowla

Tala  : Aditala



3)  S R G M | S R | S R || S R G M | P D | N S' ||

      S' N D P | S' N | S' N || S' N D P | M G | R S ||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   

೩)

ಸ ರಿ ಗ ಮ । ಸ ರಿ । ಸ ರಿ ।। ಸ ರಿ ಗ ಮ  । ಪ ದ । ನಿ ಸ' ।।

ಸ ನಿ ದ ಪ । ಸ 'ನಿ ।ಸ 'ನಿ ।। ಸ 'ನಿ ದ ಪ । ಮ ಗ । ರಿ ಸ ।।



Thursday, August 11, 2022

Na Stotrava Gaive (ನಾ ಸ್ತೋತ್ರವ ಗೈವೆ)

 

Bhaktigeete


Na stotrava gaive, sri sharadambeyanu

Dasanu dasaranu poreyendu beduvenu ||na||


Karadalli veeneyanu nudisutta dwani madi

Arivemba amrutavanu needu nee saraswatiye ||na||


Sarasijakshana ramani saraswatiye ninagindu

Shirabagi beduvenu needu nee sanmatiya ||na||


ಭಕ್ತಿಗೀತೆ 


ನಾ ಸ್ತೋತ್ರವ ಗೈವೆ , ಶ್ರೀ ಶಾರದಾಂಬೆಯನು 

ದಾಸನು ದಾಸರನು ಪೊರೆಯೆಂದು ಬೇಡುವೆನು ।।ನಾ ।।


ಕರದಲ್ಲಿ ವೀಣೆಯನು ನುಡಿಸುತ್ತ ಧ್ವನಿ ಮಾಡಿ 

ಅರಿವೆಂಬ ಅಮೃತವನು ನೀಡು ನೀ ಸರಸ್ವತಿಯೆ  ।।೧।।


ಸರಸಿಜಾಕ್ಷನ ರಮಣಿ ಸರಸ್ವತಿಯೆ ನಿನಗಿಂದು 

ಶಿರಬಾಗಿ ಬೇಡುವೆನು ನೀಡು ನೀ ಸನ್ಮತಿಯ ।।೨।।



Wednesday, August 10, 2022

Sarale Varasegalu -2 (ಸರಳೇ ವರಸೆಗಳು -೨)


Raga :Mayamalavagowla

Tala   : Aditala




2) S R G M | S R | G M || S R G M | P D | N S'||

     S' N D P | S N | D P || S' N D P | M G | R S||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೨) ಸ ರಿ ಗ ಮ । ಸ ರಿ । ಗ ಮ । ಸ ರಿ ಗ ಮ ।ಪ ದ ನಿ ಸ'।।

      ಸ'ನಿ ದ ಪ ।ಸ ನಿ ।ದ ಪ । ಸ' ನಿ ದ ಪ । ಮ ಗ ರಿ ಸ ।।



Monday, August 8, 2022

Sarale Varasegalu -1 (ಸರಳೇ ವರಸೆಗಳು -೧)

 

Raga: Mayamalavagowla

Tala: Aditala

4+2+2 = 8 Aksharagalu


1)  S R G M | P D | N S' ||

      S' N D P | M G | R S || 


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ 

೪+೨+೨ = ೮ ಅಕ್ಷರಗಳು 


೧) ಸ ರಿ ಗ ಮ  । ಪ ದ । ನಿ ಸ' ।

     ಸ' ನಿ ದ ಪ  । ಮ ಗ  । ರಿ  ಸ ।





                                 

Nagara Haave Haavolu Hoove (ನಾಗರ ಹಾವೆ !ಹಾವೊಳು ಹೂವೆ !)

Padya

Sahitya: Panje Mangesharayaru

Song link: Click Here


Nagara haave! haavolu hoove!

Bagila biladali ninnaya ttave?

Kaigala mugive, halanneeve!

Ba ba ba ba

Ba ba ba ba


Haladiya hedeyanu biccho bega!

Holahina hondale tugo naga!

Kolannuduve lalisu raga,

Ne ne ne ne

Ne ne ne ne


Ele naganna!helelo ninna

Taleyali rannaviha nijavanna,

Balu badavage kopparigeya chinna

Tha tha tha tha

Tha tha tha tha


bari mai tannage, manadali bisi hage

Eradele nalage iddaru summage

Eraguve ninage, eegale horage

Po po po po

Po po po po


ಪದ್ಯ 


ನಾಗರ ಹಾವೆ !ಹಾವೊಳು ಹೂವೆ !

ಬಾಗಿಲ ಬಿಲದಲಿ ನಿನ್ನಯ ಠಾವೆ ?

ಕೈಗಳ ಮುಗಿವೆ ,ಹಲನ್ನೀವೆ !

ಬಾ ಬಾ ಬಾ ಬಾ 

ಬಾ ಬಾ ಬಾ ಬಾ 


ಹಳದಿಯ ಹೆಡೆಯನು ಬಿಚ್ಚೋ ಬೇಗಾ !

ಹೊಳಹಿನ ಹೊಂದಲೆ ತೂಗೋ ನಾಗಾ !

ಕೊಳಲನ್ನೂದುವೆ ಲಾಲಿಸು ರಾಗಾ ,

ನೀ ನೀ ನೀ ನೀ 

ನೀ ನೀ ನೀ ನೀ 


ಎಲೆ ನಾಗಣ್ಣಾ !ಹೇಳೆಲೊ ನಿನ್ನಾ 

ತಲೆಯಲಿ ರನ್ನವಿಹ ನಿಜವನ್ನಾ ,

ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ 

ತಾ ತಾ ತಾ ತಾ 

ತಾ ತಾ ತಾ ತಾ


ಬರಿ ಮೈ ತಣ್ಣಗೆ ,ಮನದಲಿ ಬಿಸಿ ಹಗೆ 

ಎರಡೆಳೆ ನಾಲಗೆ ಇದ್ದರು ಸುಮ್ಮಗೆ 

ಎರಗುವೆ ನಿನಗೆ ,ಈಗಲೆ ಹೊರಗೆ 

ಪೋ ಪೋ ಪೋ ಪೋ 

ಪೋ ಪೋ ಪೋ ಪೋ 

     



Sunday, August 7, 2022

Saptaswara (ಸಪ್ತಸ್ವರ )

 

Saptaswara


Sa- Shadja

Ri  - Rishabha

Ga - Gandhara

Ma- Madhyama

Pa - Panchama

Da - Dhaivata

Ni - Nishada


Warm Up


Sa  Pa  Sa

 Pa  Sa


ಸಪ್ತಸ್ವರ 


  - ಷಡ್ಜ 

ರಿ  - ಋಷಭ

  - ಗಾಂಧಾರ 

  - ಮಾಧ್ಯಮ 

  - ಪಂಚಮ 

  - ದೈವತ 

ನಿ  - ನಿಷಾದ 


ಆರಂಭ 


ಸ   ಪ  ಸ 

 ಪ   ಸ 

                   






Saturday, August 6, 2022

Meenondu Minchi Odadide (ಮೀನೊಂದು ಮಿಂಚಿ ಓಡಾಡಿದೆ )

 

Bhavageete

Sahitya : Jayanth Kaykini

Song link: Click Here



Meenondu minchi odadide

Manada kadalalake 

Arasuta eejide teerava

Hrudayada teerava


yava neera neeladalli

Kanna benki uriyitu

Yava swarada kampinalli

Madila swapna tereyitu

Teredu poora tanage tane

Antarala aralitu, antara kaleyitu


Ratriyalli yava kirana 

Odalagaya neevitu

Yava urupumeena maiyya

Olapinalli maresitu

Chukkigala ninta neera

Alavannu kalakitu, enanu hidiyitu?


Dhamani dhamani meena dhari paravashadhare

Meene doni meene kadalu

Aakashave meere

Beladingalu enta jala

Intha kadege beesitu, jeevave uliyitu


ಭಾವಗೀತೆ 


ಮೀನೊಂದು ಮಿಂಚಿ ಓಡಾಡಿದೆ 

ಮನದ ಕಡಲಾಳಕೆ , ಅರಸುತ ಈಜಿದೆ 

ತೀರವ ,ಹೃದಯದಾ ತೀರವ 


ಯಾವ ನೀರ ನೀಲದಲ್ಲಿ 

ಕಣ್ಣ ಬೆಂಕಿ ಉರಿಯಿತು 

ಯಾವ ಸ್ವರದ ಕಂಪಿನಲ್ಲಿ 

ಮಡಿಲ ಸ್ವಪ್ನ ತೆರೆಯಿತು 

ತೆರೆದು ಪೂರ ತನಗೆ ತಾನೆ 

ಅಂತರಾಳ ಅರಳಿತು ,ಅಂತರ ಕಳೆಯಿತು 


ರಾತ್ರಿಯಲ್ಲಿ ಯಾವ ಕಿರಣ 

ಒಡಲಗಾಯ ನೀವಿತು 

ಯಾವ ಉರುಪು ಮೀನ ಮೈಯ್ಯ 

ಒಳಪಿನಲ್ಲಿ ಮರೆಸಿತು 

ಚುಕ್ಕಿಗಳ ನಿಂತ ನೀರ 

ಆಳವನ್ನು ಕಲಕಿತು ,ಏನನು ಹಿಡಿಯಿತು ?


ಧಮನಿ ಧಮನಿ ಮೀನ ಧಾರಿ ಪರವಶಧಾರೆ 

ಮೀನೆ ದೋಣಿ ಮೀನೆ ಕಡಲು 

ಆಕಾಶವೇ ಮೇರೆ 

ಬೆಳದಿಂಗಳು ಎಂತ ಜಾಲ 

ಇಂಥ ಕಡೆಗೆ ಬೀಸಿತು ,ಜೀವವವೇ  ಉಳಿಯಿತು