Saptaswara
Sa- Shadja
Ri - Rishabha
Ga - Gandhara
Ma- Madhyama
Pa - Panchama
Da - Dhaivata
Ni - Nishada
Warm Up
Sa Pa Sa
Pa Sa
ಸಪ್ತಸ್ವರ
ಸ - ಷಡ್ಜ
ರಿ - ಋಷಭ
ಗ - ಗಾಂಧಾರ
ಮ - ಮಾಧ್ಯಮ
ಪ - ಪಂಚಮ
ದ - ದೈವತ
ನಿ - ನಿಷಾದ
ಆರಂಭ
ಸ ಪ ಸ
ಪ ಸ
Saptaswara
Sa- Shadja
Ri - Rishabha
Ga - Gandhara
Ma- Madhyama
Pa - Panchama
Da - Dhaivata
Ni - Nishada
Warm Up
Sa Pa Sa
Pa Sa
ಸಪ್ತಸ್ವರ
ಸ - ಷಡ್ಜ
ರಿ - ಋಷಭ
ಗ - ಗಾಂಧಾರ
ಮ - ಮಾಧ್ಯಮ
ಪ - ಪಂಚಮ
ದ - ದೈವತ
ನಿ - ನಿಷಾದ
ಆರಂಭ
ಸ ಪ ಸ
ಪ ಸ
Bhavageete
Sahitya : Jayanth Kaykini
Song link: Click Here
Meenondu minchi odadide
Manada kadalalake
Arasuta eejide teerava
Hrudayada teerava
yava neera neeladalli
Kanna benki uriyitu
Yava swarada kampinalli
Madila swapna tereyitu
Teredu poora tanage tane
Antarala aralitu, antara kaleyitu
Ratriyalli yava kirana
Odalagaya neevitu
Yava urupumeena maiyya
Olapinalli maresitu
Chukkigala ninta neera
Alavannu kalakitu, enanu hidiyitu?
Dhamani dhamani meena dhari paravashadhare
Meene doni meene kadalu
Aakashave meere
Beladingalu enta jala
Intha kadege beesitu, jeevave uliyitu
ಭಾವಗೀತೆ
ಮೀನೊಂದು ಮಿಂಚಿ ಓಡಾಡಿದೆ
ಮನದ ಕಡಲಾಳಕೆ , ಅರಸುತ ಈಜಿದೆ
ತೀರವ ,ಹೃದಯದಾ ತೀರವ
ಯಾವ ನೀರ ನೀಲದಲ್ಲಿ
ಕಣ್ಣ ಬೆಂಕಿ ಉರಿಯಿತು
ಯಾವ ಸ್ವರದ ಕಂಪಿನಲ್ಲಿ
ಮಡಿಲ ಸ್ವಪ್ನ ತೆರೆಯಿತು
ತೆರೆದು ಪೂರ ತನಗೆ ತಾನೆ
ಅಂತರಾಳ ಅರಳಿತು ,ಅಂತರ ಕಳೆಯಿತು
ರಾತ್ರಿಯಲ್ಲಿ ಯಾವ ಕಿರಣ
ಒಡಲಗಾಯ ನೀವಿತು
ಯಾವ ಉರುಪು ಮೀನ ಮೈಯ್ಯ
ಒಳಪಿನಲ್ಲಿ ಮರೆಸಿತು
ಚುಕ್ಕಿಗಳ ನಿಂತ ನೀರ
ಆಳವನ್ನು ಕಲಕಿತು ,ಏನನು ಹಿಡಿಯಿತು ?
ಧಮನಿ ಧಮನಿ ಮೀನ ಧಾರಿ ಪರವಶಧಾರೆ
ಮೀನೆ ದೋಣಿ ಮೀನೆ ಕಡಲು
ಆಕಾಶವೇ ಮೇರೆ
ಬೆಳದಿಂಗಳು ಎಂತ ಜಾಲ
ಇಂಥ ಕಡೆಗೆ ಬೀಸಿತು ,ಜೀವವವೇ ಉಳಿಯಿತು
Nadageete
Sahitya: Kuvempu
Song link: Click Here
Elladaru iru entadaru iru
Endendigu nee kannadavagiru
Kannadave satya
Kannadave nitya
Kannada govina o muddina karu
Kannada tanaondiddare nee nammage kalpataru
Kannadave satya
Kannadave nitya
Nee mettuva nela ade karnataka
Neneruva male sahyadri
Nee muttuva mara, srighandada mara
Nee kudiyuva neer kaveri
Pampananoduva ninna nalage
Kannadave satya
Kumaravyasanalipa kiviyidu
Kannadave nitya ||elladaru iru||
Harihara raghavarige eraguva mana
Halagiha hampege koraguva mana
Pempina banavasige karaguva mana
Belgola belurgala neneyuva mana
Jogada jalapatadi dhumukuva mana
Malenadige hompulivoguva mana
Kannadave satya
Kannadave nitya
Kajanake gili kogileyimpige
Mallige sampige kedage sompige
Mavina hongeya talirina tampige
Rasa romanchanagoluvatana mana
Elliddare en? entiddare en?
Endendigu taan -
Kannadave satya
Kannadave nitya
Anyavenalade mithya ||elladaru iru||
ನಾಡಗೀತೆ
ಎಲ್ಲಾದರು ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ನಮ್ಮಗೆ ಕಲ್ಪತರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ನೀ ಮೆಟ್ಟುವ ನೆಲ ಅದೆ ಕರ್ನಾಟಕ
ನೀನೇರುವ ಮಲೆ ಸಹ್ಯಾದ್ರಿ
ನೀ ಮುಟ್ಟುವ ಮರ ಶ್ರೀಗಂಧದ ಮರ
ನೀ ಕುಡಿಯುವ ನೀರ್ ಕಾವೇರಿ
ಪಂಪನನೋದುವ ನಿನ್ನಾ ನಾಲಗೆ
ಕನ್ನಡವೇ ಸತ್ಯ
ಕುಮಾರವ್ಯಾಸನಾನಾಲಿಪ ಕಿವಿಯಿದು
ಕನ್ನಡವೇ ನಿತ್ಯ ।।ಎಲ್ಲಾದರು ।।
ಹರಿಹರ ರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ
ಪೆ೦ಪಿನ ಬನವಾಸಿಗೆ ಕರಗುವ ಮನ
ಬೆಲ್ಗೊಳ ಬೆಲೂರ್ಗಳ ನೆನೆಯುವ ಮನ
ಜೋಗದ ಜಲಪಾತದಿ ಧುಮುಕುವ ಮನ
ಮಲೆನಾಡಿಗೆ ಹೊಂಪುಳಿವೋಗುವ ಮನ
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಕಾಜಾಣಕೆ ಗಿಳಿ ಕೋಗಿಲೆಯಿಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಸೊಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೊಮಾಂಚನಗೊಳುವಾತನ ಮನ
ಎಲ್ಲಿದ್ದರೆ ಏನ್ ? ಎಂತಿದ್ದರೆ ಏನ್ ?
ಎಂದೆಂದಿಗೂ ತಾನ್ -
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿಥ್ಯಾ ।।ಎಲ್ಲಾದರು ।।
Bhavageete
Sahitya: G S Shivarudrappa
Song link: Click Here
Ello hudukide illada devara
Kallu mannugala gudiyolage
Ille iruva preeti snehagala
Gurutisadadenu nammolage
Ellide nandana ellide bandhana
Ella ive ee nammolage
Olagina tiliyanu kalakade iddare
Amrutada savi ide Naligege ||1||
Hattiraviddu doora nilluvevu
Namma ahammina koteyali
Estu kastavo hondike embudu
Nalku dinada ee badukinali ||2||
ಭಾವಗೀತೆ
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಈ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೆ
ಎಲ್ಲಿದೆ ನಂದನ ಎಲ್ಲಿದೆ ಬಂಧನ
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಿಗೆಗೆ ।।೧।।
ಹತ್ತಿರವಿದ್ದೂ ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೊ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ ।।೨।।
Gagana nee bhuvana nee
Shikhara nee
Danidare dharanige
Dhaniyu nee
Udaya nee ulke nee
Sakhala nee
Panavidu naleya
Charite nee
Yugavu iruva tanakavu neene
Janara kayodhamaniyu neene
Tadeva aleyu nooride munde
Anjadedeya navikanedure
Panavidu naleya
Charite nee (2)
Savira padegalu samarave sarali
Kshanadali
Obbane sainika ninage nee
Aayudha jagadali
Thandani tane tane thandano
Thane nane no
He thandani tane tane thandano
Thane nane no..
ಚಿತ್ರಗೀತೆ
ಗಗನ ನೀ ಭುವನ ನೀ
ಶಿಖರ ನೀ
ದಣಿದರೆ ಧರಣಿಗೆ
ಧಣಿಯು ನೀ
ಉದಯ ನೀ ಉಲ್ಕೆ ನೀ
ಸಖಲ ನೀ
ಪಣವಿಡು ನಾಳೆಯ
ಚರಿತೆ ನೀ
ಯುಗವು ಇರುವ ತನಕವೂ ನೀನೇ
ಜನರ ಕಾಯೋ ಧಮನಿಯು ನೀನೇ
ತಡೆವ ಅಲೆಯು ನೂರಿದೆ ಮುಂದೆ
ಅಂಜದೆದೆಯ ನಾವಿಕನೆದುರೇ
ಪಣವಿಡು ನಾಳೆಯ
ಚರಿತೆ ನೀ (೨)
ಸಾವಿರ ಪಡೆಗಳು ಸಮರವೇ ಸಾರಲಿ
ಕ್ಷಣದಲಿ
ಒಬ್ಬನೇ ಸೈನಿಕ ನಿನಗೆ ನೀ
ಆಯುಧ ಜಗದಲಿ
ತಂದಾನಿ ತಾನೇ ತಾನೇ ತಂದಾನೋ
ತಾನೇ ನಾನೇನೋ
ಹೇ ತಂದಾನಿ ತಾನೇ ತಾನೇ ತಂದಾನೋ
ತಾನೇ ನಾನೇನೋ ..
Bhaktigeete
Purandara Dasara Keerthanegalu
Song link: Click Here
Raga: Kamboja
Tala: Jampetala
Idu bhagya idu bhagya idu bhagyavayya
Padumanabhana pada, bhajane sukhavayya
Kallagi iralubeku katina bhavatoreyolage
Billagi iralubeku ballavarolage
Mellane madhavana manava mecchisabeku
Bellavagirabeku bhandu janarolage ||idu bhagya||
Buddhiyindali manava tiddi kollalubeku
Muddagiralu beku muni yogigalige
Madwa matabdiyolu meenagiralubeku
Shuddhanagiralubeku karana trayagalali ||idu bhagya||
Vishayabhogada trunake uriyagiralubeku
Nishi hagalu srihariya neneyabeku
Vasudheesha purandara vittalarayana
Hasanada dasara sevisalubeku ||idu bhagya|| sri
ಭಕ್ತಿಗೀತೆ
ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ।।ಪ ।।
ಪದುಮನಾಭನ ಪಾದ ಭಜನೆ ಸುಖವಯ್ಯ ।।ಅನು ।।
ಕಲ್ಲಾಗಿ ಇರಲುಬೇಕು ಕಠಿಣ ಭವತೊರೆಯೊಳಗೆ
ಬಿಲ್ಲಾಗಿ ಇರಲುಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಿರಬೇಕು ಬಂಧು ಜನರೊಳಗೆ ।।೧।।
ಬುದ್ದಿಯಿಂದಲಿ ಮನವ ತಿದ್ದಿ ಕೊಳ್ಳಲು ಬೇಕು
ಮುದ್ದಾಗಿರಲು ಬೇಕು ಮುನಿಯೋಗಿಗಳಿಗೆ
ಮಧ್ವ ಮಾತಾಬ್ದಿಯೊಳು ಮೀನಾಗಿರಲುಬೇಕು
ಶುದ್ಧನಾಗಿರಲುಬೇಕು ಕರಣ ತ್ರಯಗಳಲಿ ।।೨।।
ವಿಷಯಭೋಗದ ತೃಣಕೆ ಉರಿಯಾಗಿರಲುಬೇಕು
ನಿಶಿ ಹಗಲು ಶ್ರೀಹರಿಯ ನೆನೆಯಬೇಕು
ವಸುಧೀಶ ಪುರಂದರ ವಿಠ್ಠಲರಾಯನ
ಹಸನಾದ ದಾಸರ ಸೇವಿಸಲುಬೇಕು ।।೩।। ಶ್ರೀ
Kenakutide ninna kann nota
Kunisutide ninna kann ata
Seleyalu ninna tanuvina mata
Kaliyalu aase
Pranayada pata
Maduvudeniga?
Sanje bana banna kande kenneli
Kande chandra tanda kanti ninna kannali
Nee nudidaru sogasu
Mounavu sogasu
Ella sangeetave..
Indu kanda anda alla ninnadu
Nalle endo kanda sneha prema nammadu
Idu savira januma
Jotheyali navu
Kanda aanandavu..
ಚಿತ್ರಗೀತೆ
ಕೆಣಕುತಿದೆ ನಿನ್ನ ಕಣ್ಣ್ ನೋಟ
ಕುಣಿಸುತಿದೆ ನಿನ್ನ ಕಣ್ಣ್ ಆಟ
ಸೆಳೆಯಲು ನಿನ್ನ ತನುವಿನ ಮಾಟ
ಕಲಿಯಲು ಆಸೆ ಪ್ರಣಯದ ಪಾಠ
ಮಾಡುವುದೇನಿಗ ?
ಸಂಜೆ ಬಾನ ಬಣ್ಣ ಕಂಡೆ ಕೆನ್ನೇಲಿ
ಕಂಡೆ ಚಂದ್ರ ತಂದ ಕಾಂತಿ ನಿನ್ನ ಕಣ್ಣಲಿ
ನೀ ನುಡಿದರು ಸೊಗಸು
ಮೌನವು ಸೊಗಸು
ಎಲ್ಲ ಸಂಗೀತವೇ ।।೧।।
ಇಂದು ಕಂಡ ಅಂದ ಅಲ್ಲ ನಿನ್ನದು
ನಲ್ಲೆ ಎಂದೋ ಕಂಡ ಸ್ನೇಹ ಪ್ರೇಮ ನಮ್ಮದು
ಇದು ಸಾವಿರ ಜನುಮ
ಜೊತೆಯಲಿ ನಾವು
ಕಂಡ ಆನಂದವು ।।೨।।