Monday, June 20, 2022

Himagiriya Shringa Devanadi Ganga (ಹಿಮಗಿರಿಯಾ ಶೃಂಗ ದೇವನದೀ ಗಂಗಾ)

Deshabhakti geete

                                 Song link: Click Here


Himagiriya shringa

Devanadi ganga

Manadali mudipa bhava vinutana

Anupama uttunga....

Anupama uttunga....


Divya sanatana samskrutige 

Veda puranave  sakshigalu

Hinduvinnunati avanatige

Sakshi himadriya shikaragalu

Anjuva edeyali dhairyada panjanu

Urisuva manjina mahalugalu


Aa suralokava meerisuva 

Nadige dhumukida bhageerathi

Bharata mateya sangadali

Dhanyate yaantiha bhagyavati

Hindu deshada kana kana jana mana

Pavanagolisiha punyavati


Sole geluvina sopana

Dudukade nade nee jopana

Novali nondiha bandhuvige

Needuta dhairya samadhana

Mateya gourava rakshanegagi

Mudipagiralemmeya prana


ದೇಶಭಕ್ತಿಗೀತೆ 


ಹಿಮಗಿರಿಯಾ ಶೃಂಗ 

ದೇವನದೀ ಗಂಗಾ 

ಮನದಲಿ ಮೂಡಿಪ 

ಭಾವ ವಿನೂತನ 

ಅನುಪಮ ಉತ್ತುಂಗಾ .. 

ಅನುಪಮ ಉತ್ತುಂಗಾ ..।।ಪ ।।


ದಿವ್ಯ ಸನಾತನ ಸಂಸ್ಕೃತಿಗೆ 

ವೇದ ಪುರಾಣವೇ ಸಾಕ್ಷಿಗಳು 

ಹಿಂದುವಿನ್ನುನತಿ ಅವನತಿಗೆ 

ಸಾಕ್ಷಿ ಹಿಮಾದ್ರಿಯ ಶಿಖರಗಳು 

ಅಂಜುವ ಎದೆಯಲಿ ಧೈರ್ಯದ ಪಂಜನು 

ಉರಿಸುವ ಮಂಜಿನ ಮಹಲುಗಳು ।।೧।।


ಆ ಸುರಲೋಕವ ಮೀರಿಸುವಾ 

ನಾಡಿಗೆ ಧುಮುಕಿದ ಭಾಗೀರಥಿ 

ಭಾರತ ಮಾತೆಯ ಸಂಗದಲಿ 

ಧನ್ಯತೆಯಾಂತಿಹ ಭಾಗ್ಯವತಿ 

ಹಿಂದೂ ದೇಶದ ಕಣ ಕಣ ಜನ ಮನ 

ಪಾವನಗೊಳಿಸಿಹ ಪುಣ್ಯವತೀ ।।೨।।


ಸೋಲೇ ಗೆಲುವಿನ ಸೋಪಾನ 

ದುಡುಕದೆ ನಡೆ ನೀ ಜೋಪಾನ 

ನೋವಲಿ ನೊಂದಿಹ ಬಂಧುವಿಗೆ 

ನೀಡುತ ಧೈರ್ಯ ಸಮಾಧಾನ 

ಮಾತೆಯ ಗೌರವ ರಕ್ಷಣೆಗಾಗಿ 

ಮುಡಿಪಾಗಿರಲೆಮ್ಮೆಯ ಪ್ರಾಣ ।।೩।।



Sunday, June 19, 2022

Elli Hoguviri Nilli Modagale (ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ)

 

Bhavageete

Sahitya: G S Shivarudrappa

Song link: Click Here


Elli hoguviri nilli modagale

Nalku haniya chelli

Dina dinavu kadu bayari bende

Bengadira taapadalli


Nannedeya hasiru usiru kugiidaru

Baralilla ninage karuna

Nanna hrudayadali novu midiyutide

Nanu nimage sharana 


Badavada nanna odaluriya bege

Nimagarivu aagalahude?

Neelagaganadali teli hogutiha

Nimmaneleyabahude?


Bayuntu nanage, kugaballena

Nimmedeya premavannu

Neevu karunisalu nanna hasiredeyu

Usiruvudu harshavannu


O banni banni 

O tanni tanni

Nanedege tampa tanni

Nonda jeevarige tampaneeyuvude

Parama poojeyenni!


ಭಾವಗೀತೆ 


ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ 

ನಾಲ್ಕು ಹನಿಯ ಚೆಲ್ಲಿ 

ದಿನದಿನವು ಕಾದು ಬಾಯಾರಿ ಬೆಂದೆ 

ಬೆಂಗದಿರ ತಾಪದಲ್ಲಿ ।।ಪ ।।


ನನ್ನೆದೆಯ ಹಸಿರು ಉಸಿರು ಕುಗ್ಗಿದರು 

ಬರಲಿಲ್ಲ ನಿನಗೆ ಕರುಣ 

ನನ್ನ ಹೃದಯದಲಿ ನೋವು ಮಿಡಿಯುತಿದೆ 

ನಾನು ನಿಮಗೆ ಶರಣ ।।೧।।


ಬಡವಾದ ನನ್ನ ಒಡಲುರಿಯ ಬೇಗೆ 

ನಿಮಗರಿವು ಆಗಲಹುದೆ ?

ನೀಲಗಗನದಲಿ ತೇಲಿ ಹೋಗುತಿಹ 

ನಿಮ್ಮನೆಳೆಯಬಹುದೆ ? ।।೨।।


ಬಾಯುಂಟು ನನಗೆ, ಕೊಗಬಲ್ಲೆನಾ 

ನಿಮ್ಮೆದೆಯ ಪ್ರೇಮವನ್ನು 

ನೀವು ಕರುಣಿಸಲು ನನ್ನ ಹಸಿರೆದೆಯು 

ಉಸಿರುವುದು ಹರ್ಷವನ್ನು ।।೩।।


ಓ ಬನ್ನಿ ಬನ್ನಿ 

ಓ ತನ್ನಿ ತನ್ನಿ 

ನನ್ನೆದೆಗೆ ತಂಪತನ್ನಿ 

ನೊಂದ ಜೀವರಿಗೆ ತಂಪನೀಯುವುದೆ 

ಪರಮ ಪೂಜೆಯೆನ್ನಿ ! ।।೪।।


                            

Saturday, June 18, 2022

Nageyu Barutide (ನಗೆಯು ಬರುತಿದೆ)


Bhaktigeete

                        Purandara Dasara Keerthanegalu

                            Song link: Click Here


Raga: Panthuvarali

Tala: Ekatala


Nageyu barutide

Enage

Negeyu barutide


Jagadoliruva manujarella

Hagarana maduvuda kandu


Nageyu barutide

Enage

Negeyu barutide ||


Parara vaniteya olumegolidu

Harushadinda avala beredu

Hriva neerinollage mulugi

Berala enisutihara kandu ||


Patiya seve bittu 

Para patiya koode sarasavadi

Satata maiyya toledu 

Halavu vratava malpa satiya kandu ||


Kama kroda manadolittu

Tanu vishayapunjanagi

Swami purandara vittalana

Nama neneyuvavara kandu ||                          sri


ಭಕ್ತಿಗೀತೆ 


ನಗೆಯು ಬರುತಿದೆ 

ಎನಗೆ 

ನಗೆಯು ಬರುತಿದೆ ।।ಪ ।।


ಜಗದೊಳಿರುವ ಮನುಜರೆಲ್ಲ 

ಹಗರಣ ಮಾಡುವುದ ಕಂಡು ।।ಅನು ।।


ನಗೆಯು ಬರುತಿದೆ 

ಎನಗೆ 

ನಗೆಯು ಬರುತಿದೆ 


ಪರರ ವನಿತೆ ಒಲುಮೆಗೊಲಿದು 

ಹರುಷದಿಂದ ಅವಳ ಬೆರೆದು 

ಹರಿವ ನೀರಿನೊಳಗೆ ಮುಳುಗಿ 

ಬೆರಳ ಎಣಿಸುತಿಹರ ಕಂಡು ।।೧।।


ಪತಿಯ ಸೇವೆ ಬಿಟ್ಟು 

ಪರ ಪತಿಯ ಕೂಡೆ ಸರಸವಾಡಿ 

ಸತತ ಮೈಯ ತೊಳೆದು 

ಹಲವು ವ್ರತವ ಮಾಳ್ಪ ಸತಿಯ ಕಂಡು ।।೨।।


ಕಾಮ ಕ್ರೋಧ ಮನದೊಳಿಟ್ಟು 

ತಾನು ವಿಷಯಪುಂಜನಾಗಿ 

ಸ್ವಾಮಿ ಪುರಂದರ ವಿಠ್ಠಲನ 

ನಾಮ ನೆನೆಯುವವರ ಕಂಡು  ।।೩।।                          ಶ್ರೀ 



Friday, June 17, 2022

Karunalu Ba Belake (ಕರುಣಾಳು ಬಾ ಬೆಳಕೆ)

Bhavageete

Sahitya: B M Sri

Song link: Click Here



Karunalu ba belake

Musukidi mabbinali

Kai hididu nadesennanu

Erulu kattaleya gavi

Mane doora kanikarisi

Kai hididu nadesennanu


Heli nannadiyidisu balu doora notavanu

Kelanodaneye saku nangondu hejje

Munna intiradade ninna bedade hode

Kai hididu nadesennanu


Istu dina salahiruve ee moorkhananu neenu

Mundeyu kai hididu nadesadiheya

Kastadadaviya kaledu betta holegala hadu

Irulannu nukadiheya?


Belagaga holeyade hindomme nanolidu

Ee naduve kalakonda divya mukha naguta


ಭಾವಗೀತೆ 


ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ 

ಕೈ ಹಿಡಿದು ನಡೆಸೆನ್ನನು 

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ 

ಕೈ ಹಿಡಿದು ನಡೆಸೆನ್ನನು ।।ಪ ।।


ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು 

ಕೆಳನೊಡನೆಯೆ ಸಾಕು ನನಗೊಂದು ಹೆಜ್ಜೆ 

ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ 

ಕೈ ಹಿಡಿದು ನಡೆಸೆನ್ನನು 


ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು 

ಮುಂದೆಯೂ ಕೈ ಹಿಡಿದು ನಡೆಸದಿಹೆಯಾ 

ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು 

ಇರುಳನ್ನು ನೂಕದಿಹೆಯಾ ?


ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು 

ಈ ನಡುವೆ ಕಳಕೊಂಡ ದಿವ್ಯ ಮುಖ ನಗುತ ..



Wednesday, June 15, 2022

Na Ninnaolanya Beduvudilla (ನಾ ನಿನ್ನೊಳನ್ಯ ಬೇಡುವುದಿಲ್ಲ)

Bhaktigeete

Purandara Dasara Keerthanegalu

Song link:Click Here


Raga: Purvi

Tala: Atatala


Na ninnaolanya beduvudilla

Enna hrudaya kamaladolu

Nindiru hariye

Na ninnaolanya beduvudilla ||


Shira ninna charanake eragali

Enna chakshu sada ninna nodali hariye

Karna geetangala kelali

Ninna nirmalyava nasavagranisali hariye ||


Nalige ninna kondadali

Enna karagaleradu ninnarchisali hariye

Charana teertayatre madali

Enna mana anudina ninna smarisali hariye ||


Buddhi ninnolu berethogali

Enna chitta ninnolu stiravagirali hariye

Bhakta janara sangavagali

Purandara vittalane este dayamadu hariye ||      Sri


ಭಕ್ತಿಗೀತೆ 


ನಾ ನಿನ್ನೊಳನ್ಯ ಬೇಡುವುದಿಲ್ಲ 

ಎನ್ನ ಹೃದಯಕಮಲದೊಳು ನಿಂದಿರು ಹರಿಯೆ 

ನಾ ನಿನ್ನೊಳನ್ಯ ಬೇಡುವುದಿಲ್ಲ।।ಪ ।।


ಶಿರ ನಿನ್ನ ಚರಣಕೆ ಎರಗಲಿ 

ಎನ್ನ ಚಕ್ಷು ಸದಾ ನಿನ್ನ ನೋಡಲಿ ಹರಿಯೆ 

ಕರ್ಣ ಗೀತಂಗಳ ಕೇಳಲಿ 

ನಿನ್ನ ನಿರ್ಮಾಲ್ಯವ ನಾಸವಾಗ್ರಾಣಿಸಲಿ ಹರಿಯೆ ।।೧।।


ನಾಲಿಗೆ ನಿನ್ನ ಕೊಂಡಾಡಲಿ 

ಎನ್ನ ಕರಗಳೆರಡು ನಿನ್ನರ್ಚಿಸಲಿ ಹರಿಯೆ 

ಚರಣ ತೀರ್ಥಯಾತ್ರೆ ಮಾಡಲಿ 

ಎನ್ನ ಮನ ಅನುದಿನ ನಿನ್ನ ಸ್ಮರಿಸಲಿ ಹರಿಯೆ ।।೨।।


ಭುದ್ಧಿ  ನಿನ್ನೊಳು   ಬೆರೆತೋಗಲಿ 

ಎನ್ನ ಚಿತ್ತ ನಿನ್ನೊಳು ಸ್ಥಿರವಾಗಲಿ ಹರಿಯೆ 

ಭಕ್ತ ಜನರ ಸಂಗವಾಗಲಿ 

ಪುರಂದರ ವಿಠ್ಠಲನೇ ಇಷ್ಟೆ ದಯಮಾಡು ಹರಿಯೆ ।।೩।।      ಶ್ರೀ 




Tuesday, June 14, 2022

Nanna Desha Nanna Jana (ನನ್ನ ದೇಶ ನನ್ನ ಜನ)

Deshabhakti Geete

                                 Sahitya: Chennaveera Kanavi

                                Song link: Click Here


Nanna desha nanna jana

Nanna mana prana ghana

Teerisuvene adara runa

Ee onde janmadi


Kempu nelada hasiru bele

Kappu banna mogada kale

Surya chandra chukkigale

Namma hiriya okkalu


Nooru bhava bashe nele

Nooru banna vesha kale

Swachandada hakkigale

Namma hadu badukalu


Prachenava tikki tole

Vartamana jeeva kale

Ukkerali bala hole

Aa bhavishyadodalige


Mai kodavide mooka jana

Kai hidiyiri naku chana

Eddelali ella guna

Aa samrudda balige


ದೇಶಭಕ್ತಿಗೀತೆ 


ನನ್ನ ದೇಶ ನನ್ನ ಜನ 

ನನ್ನ ಮಾನ ಪ್ರಾಣ ಘನ  

ತೀರಿಸುವೆನೆ ಅದರ ಋಣ 

ಈ ಒಂದೇ ಜನ್ಮದಿ ।।ಪ ।।


ಕೆಂಪು ನೆಲದ ಹಸಿರು ಬೆಳೆ 

ಕಪ್ಪು ಬಣ್ಣ ಮೊಗದ ಕಳೆ 

ಸೂರ್ಯ ಚಂದ್ರ ಚುಕ್ಕಿಗಳೆ 

ನಮ್ಮ ಹಿರಿಯ ಒಕ್ಕಲು ।।೧।।


ನೂರು ಭಾವ ಭಾಷೆ ನೆಲೆ 

ನೂರು ಬಣ್ಣ ವೇಷ ಕಲೆ 

ಸ್ವಚ್ಛಂದದ ಹಕ್ಕಿಗಳೆ 

ನಮ್ಮ ಹಾಡು ಬದುಕಲು।।೨।। 


ಪ್ರಾಚಿನವ ತಿಕ್ಕಿ ತೊಳೆ 

ವರ್ತಮಾನ ಜೀವ ಕಳೆ 

ಉಕ್ಕೇರಲಿ ಬಾಳ ಹೊಳೆ 

ಆ ಭವಿಷ್ಯದೊಡಲಿಗೆ ।।೩।।


ಮೈ ಕೊಡವಿದೆ ಮೂಕಜನ 

ಕೈ ಹಿಡಿಯಿರಿ ನಾಕು ಚಣ 

ಎದ್ದೇಳಲಿ ಎಲ್ಲ ಗುಣ 

ಆ ಸಮೃದ್ಧ ಬಾಳಿಗೆ ।।೪।।

          



Monday, June 13, 2022

Manava Janma Doddadu (ಮಾನವ ಜನ್ಮ ದೊಡ್ಡದು)

Bhaktigeete

Purandara Dasara Keerthanegalu

Movie: Navakoti Narayana (1964)

Singer: M Balamuralikrishna

Song link:Click Here


Raga: Regupti

Tala: Atatala


Manava Janma Doddadu

Ida hani madalubedi

Hucchappagalira..


Kannu kai kalkivi nalige iralikke

Mannu mukki marulaguvare

Hennu mannigagi hariya nanamruta

Unnade upavasa iruvare khodi  ||


Kalana dootaru kalpididelevaga

Talu talendare taluvare

Dhalibarada munna dharmava galisiro

Halu samsaragalige sikkalu bedi  ||


Enu karana yadupatiyanu maretiri

Dhana dhanya putraru kayuvare

Innadaru eako bhavadi bhajisiro

Chenna sri purandara vittala rayana  ||               sri



ಭಕ್ತಿಗೀತೆ 


ಮಾನವ ಜನ್ಮ ದೊಡ್ಡದು 

ಇದ ಹಾನಿ ಮಾಡಲುಬೇಡಿ 

ಹುಚ್ಚಪಗಳಿರಾ ।।ಪ ।।


ಕಣ್ಣು ಕೈ ಕಲ್ಕಿವಿ ನಾಲಿಗೆ ಇರಲಿಕ್ಕೆ 

ಮಣ್ಣು ಮುಕ್ಕಿ ಮರುಳಾಗುವರೇ  

ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ 

ಉಣ್ಣದೆ ಉಪವಾಸ ಇರುವರೆ ಖೋಡಿ ।।೧।।


ಕಾಲನ ದೂತರು ಕಾಲ್ಪಿಡಿದೆಳೆವಾಗ 

ತಾಳು ತಾಳೆಂದರೆ ತಾಳುವರೆ 

ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ 

ಹಾಳು ಸಂಸಾರಗಳಿಗೆ ಸಿಕ್ಕಲು ಬೇಡಿ ।।೨।।


ಏನು ಕಾರಣ ಯದುಪತಿಯನು ಮರೆತಿರಿ 

ಧನ ಧಾನ್ಯ ಪುತ್ರರು ಕಾಯುವರೆ 

ಇನ್ನಾದರು ಏಕೋ ಭಾವದಿ ಭಜಿಸಿರೊ 

ಚೆನ್ನ ಶ್ರೀ ಪುರಂದರ ವಿಠ್ಠಲರಾಯನ ।।೩।।                        ಶ್ರೀ