Wednesday, April 27, 2022

Amma Nanu Devarane Benne Kadillama (ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ)


Bhavageete

Sahitya : Dr H S Venktesh Murthy

Song link: Click Here



Amma nanu devarane benne kadillama

Benne kadillama..

Amma...


Amma nanu devarane benne kadillama

Ella seri nanna bayige benneya methidaramma

Amma nanu devarane benne kadillama..


Neene nodu benne gadige

Soorina niluvalli

Hege tane tegeyali amma

Nanna putta kaigalalli


Amma nanu devarane benne kadillama


Shama helida.... aa aa

Shama helida benne methida

Tanna bayi oresutha

Benne oresida kaiya

Benna hinde maresutta


Amma nanu devarane benne kadillama


Ettida kaiya kadagolannu

Moolelittu nakkalu gopi

Sooradasa priya shamana

Muttitu nakkalu gopi


Amma nanu devarane benne kadillama

Ella seri nanna bayige benneya methidaramma

Amma nanu devarane benne kadillama..


ಭಾವಗೀತೆ 


ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ 

ಎಲ್ಲ ಸೇರಿ ನನ್ನ ಬಾಯಿಗೆ ಬೆಣ್ಣೆಯ ಮೆತ್ತಿದರಮ್ಮ ।।ಪ ।।


ಅಮ್ಮ ನಾನು.... 


ನೀನೆ ನೋಡು ಬೆಣ್ಣೆ ಗಡಿಗೆ 

ಸೂರಿನ ನಿಲುವಲ್ಲಿ

ಹೇಗೆ ತಾನೆ ತೆಗೆಯಲಿ ಅಮ್ಮ 

ನನ್ನ ಪುಟ್ಟ ಕೈಗಳಿಂದ ।।೧।।


ಶಾಮ ಹೇಳಿದ ........ 

ಶಾಮ ಹೇಳಿದ ಬೆಣ್ಣೆ ಮೆತ್ತಿದ 

ತನ್ನ ಬಾಯಿ ವರೆಸುತ್ತ 

ಬೆಣ್ಣೆ ವರೆಸಿದ ಕೈಯ

ಬೆನ್ನ ಹಿಂದೆ ಮರೆಸುತ್ತ ।।೨।।


ಎತ್ತಿದ ಕೈಯ ಕಡಗೋಲನ್ನ 

ಮೂಲೆಲಿಟ್ಟು ನಕ್ಕಳು ಗೋಪಿ 

ಸೂರದಾಸ ಪ್ರಿಯ ಶಾಮನ 

ಮುತ್ತಿಟ್ಟು ನಕ್ಕಳು ಗೋಪಿ ।।೩।।





Tuesday, April 26, 2022

Ondu Munjavinali Tunturina Sonemale (ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ )


Bhavageete

Sahitya : Chennaveera kanavi

Song link: Click Here


Ondu munjavinali tunturina sone male

Soo.. endu shruti hididu suriyutittu

Adake  himmelavane sosi baha suli gali

Tengu garigala naduve nusulutittu


Ondu munjavinali tunturina sone male


Ele vennu maidoledu makarandad arishinadi

Hoo.. mudidu madhu magala holutittu

Moodanadi nesarana nage mogada srikanti

Biliya modada hinde holeyutittu


Ondu munjavinali tunturina sone male


Hullesslu hoopakale muttu hanigala minchu

Sodarinali aratiya belagutittu

korulukki hadutiha chikka pakkiya balaga

Shubamastu shubamastu ennutittu


Ondu munjavinali tunturina sone male


Talira toranadalli balli madagalalli

Dumbigala omkara hommutittu

Haccha hasurina pacche nela gattinangaladi

Chitte ringana gunitha hakutittu


Ondu munjavinali tunturina sone male


Usheya nungadapinali harsha bashpagalante

Marada hani tata patane udurutittu

Sristi leeleyolintu thalleenavada mana

Mumbala saviganasa neneyutittu


Ondu munjavinali tunturina sone male

Soo.. endu shruti hididu suriyutittu


Ondu munjavinali tunturina sone male..


ಭಾವಗೀತೆ 


ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ 

ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು 

ಅದಕೇ ಹಿಮ್ಮೇಳವನೆ  ಸೋಸಿ ಬಹ ಸುಳಿ ಗಾಳಿ 

ತೆಂಗು ಗರಿಗಳ ನಡುವೆ ನುಸುಳುತಿತ್ತು ।।ಪ ।।


ಇಳೆ ವೆಣ್ಣು ಮೈದೊಳೆದು ಮಕರಂದದರಿಶಿಣದಿ 

ಹೂ ಮುಡಿದು ಮಧುಮಗಳ ಹೋಲುತಿತ್ತು 

ಮೂಡಣದಿ ನೇಸರನ ನಗೆ ಮೊಗದ ಶ್ರೀಕಾಂತಿ 

ಬಿಳಿಯ ಮೋಡದ ಹಿಂದೆ ಹೊಳೆಯುತಿತ್ತು ।।೧।।


ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು 

ಸೊಡರಿನಲಿ ಆರತಿಯ ಬೆಳಗುತ್ತಿತ್ತು 

ಕೊರಲುಕ್ಕಿ ಹಾಡುತಿಹ ಚಿಕ್ಕ ಪಕ್ಕಿಯ ಬಳಗ 

ಶುಭಮಸ್ತು ಶುಭಮಸ್ತು ಎನುತಿತ್ತು ।।೨।।


ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ 

ದುಂಬಿಗಳ ಓಂಕಾರ ಹೊಮ್ಮುತಿತ್ತು 

ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ 

ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು ।।೩।।


ಉಷೆಯ ನುಂಗದಪಿನಲಿ ಹರ್ಷ ಬಾಷ್ಪಗಳಂತೆ 

ಮರದ ಹನಿ ತಟಪಟನೆ ಉದುರುತಿತ್ತು 

ಸೃಷ್ಟಿ ಲೀಲೆಯೊಳಿಂತು ತಲ್ಲೀನವಾದ ಮನ 

ಮುಂಬಾಳ ಸವಿಗನಸ ನೆನೆಯುತಿತ್ತು ।।೪।।



Saturday, April 23, 2022

Doni Saagali Munde Hogali (ದೋಣಿ ಸಾಗಲಿ, ಮುಂದೆ ಹೋಗಲಿ)

Bhavageete

                                     Sahitya : Kuvempu

                                Movie: Miss Leelavathi (1965)

                                   Singers: S Janaki, Ramachandra

                                   Song link: Click Here


Doni saagali munde hogali

Doora teerava serali

Beesu gaalige beelu teluva

Tereya megade haarali ||


Honnagindiya hididu kaiyolu

Hemavariya chimukisi

Megha malege bannaveeyuta

Yaksha lokava virachisi

Nodi moodanada digantadi

Moodu vennina maisiri

Rangisuttide cheluveyakege 

Suprabhatava bayasiri ||


Kereya anchina mele minchina

Hanigalandadi himamani

Minchtirpuvu moodutaitare

Bala komala dinamani

Hasuru jolada holada galiyu

Teedi tannage barutide

Hudugi haaduva matta kokila

Madhura vaniya tarutide ||


Doora bettada mele teluva

Beliya modava nodiri   aa...a

Adane holuta, ante teluta

Doni atavanadiri

Navu leelamatra jeevaru

Namma jeevana leelege

Nenne nennege, indu indige

Irali naleyu nalege ||



ಭಾವಗೀತೆ 


ದೋಣಿ ಸಾಗಲಿ, ಮುಂದೆ ಹೋಗಲಿ 

ದೂರ ತೀರವ ಸೇರಲಿ 

ಬೀಸು ಗಾಳಿಗೆ ಬೀಳು ತೇಳುವ 

ತೆರೆಯ ಮೇಗಡೆ ಹಾರಲಿ ।।ಪ ।।


ಹೊನ್ನಗಿಂಡಿಯ ಹಿಡಿದು ಕೈಯೊಳು 

ಹೇಮವಾರಿಯ ಚಿಮುಕಿಸಿ 

ಮೇಘ ಮಾಲೆಗೆ ಬಣ್ಣವೀಯುತ 

ಯಕ್ಷಲೋಕವ ವಿರಚಿಸಿ 

ನೋಡಿ ಮೂಡಣದಾ ದಿಗಂತದಿ, ಮೂಡುವೆಣ್ಣಿನ ಮೈಸಿರಿ 

ರಂಜಿಸುತ್ತಿದೆ ಚೆಲುವೆಯಾಕೆಗೆ 

ಸುಪ್ರಭಾತವ ಬಯಸಿರಿ ।।೧।।


ಕೆರೆಯ ಅಂಚಿನ ಮೇಲೆ ಮಿಂಚಿನ 

ಹನಿಗಳಂದದಿ ಹಿಮಮಣಿ 

ಮಿಂಚುತಿರ್ಪುವು ಮೂಡುತೈತರೆ 

ಬಾಲ ಕೋಮಲ ದಿನಮಣಿ 

ಹಸುರು ಜೋಳದ ಹೊಲದ ಗಾಳಿಯು 

ತೀಡಿ ತಣ್ಣಗೆ ಬರುತಿದೆ 

ಹುದುಗಿ ಹಾಡುವ ಮತ್ತ ಕೋಕಿಲ 

ಮಧುರ ವಾಣಿಯ ತರುತಿದೆ ।।೨।।


ದೂರ ಬೆಟ್ಟದ ಮೇಲೆ ತೇಲುವ 

ಬಿಳಿಯ ಮೋಡವ ನೋಡಿರಿ ಆಆ .... ಆ 

ಅದನೆ ಹೋಲುತ, ಅಂತೆ ತೇಲುತಾ  

ದೋಣಿ ಆಟವನಾಡಿರೀ  

ನಾವು ಲೀಲಾಮಾತ್ರ ಜೀವರು 

ನಮ್ಮ ಜೀವನ ಲೀಲೆಗೆ 

ನಿನ್ನೆ ನಿನ್ನೆಗೆ, ಇಂದು ಇಂದಿಗೆ 

ಇರಲಿ ನಾಳೆಯು ನಾಳೆಗೆ ।।೩।।





Nityotsava (ನಿತ್ಯೋತ್ಸವ)

Bhavageete

                             Sahitya: K S Nissar Ahmed

                                   Song link: Click Here


Jogada siri belakinalli, tungeya tene balukinalli,

Sahyadriya lohadadira uttungada nilukinali,

Nityaharidwarna vanada tega ghanda tarugalalli

Nityotsava tayi nityotsava

Ninage nityotsava tayi nityotsava ||


Etihasada himadallina simhasana maleyalli,

Gata sahasa saarutiruva shasanagala salinalli,

Olegariya sirigalalli, degulagala bhittigalali

Nityotsava tayi nityotsava

Ninage nityotsava tayi nityotsava ||


Halavennada hirime ye, kulavennada garime ye

Sadvikasa sheela nudiya lokavruta seeme ye

Ee vatsara nirmatsara manadudara mahime ye

Nityotsava tayi nityotsava

Ninage nityotsava tayi nityotsava ||



ಭಾವಗೀತೆ 


ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ, 

ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ, 

ನಿತ್ಯ ಹರಿದ್ವರ್ಣ ವನದ ತೇಗ ಗಂಧ ತರುಗಳಲ್ಲಿ 

ನಿತ್ಯೋತ್ಸವ ತಾಯಿ ನಿತ್ಯೋತ್ಸವ

ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ।।ಪ ।।


ಇತಿಹಾಸದ ಹಿಮದಲ್ಲಿನ ಸಿಂಹಾಸನ ಮಾಲೆಯಲ್ಲಿ, 

ಗತ ಸಾಹಸ ಸಾರುತಿರುವ ಶಾಸನಗಳ ಸಾಲಿನಲ್ಲಿ 

ಓಲೆಗರಿಯ ಸಿರಿಗಳಲ್ಲಿ, ದೇಗುಲಗಳ ಭಿತ್ತಿಗಳಲಿ 

ನಿತ್ಯೋತ್ಸವ ತಾಯಿ ನಿತ್ಯೋತ್ಸವ

ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ ।।೧।।


ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ, 

ಸದ್ವಿಕಾಸ ಶೀಲ ನುಡಿಯ ಲೋಕಾವೃತ ಸೀಮೆಯೆ, 

ಈ ವತ್ಸರ ನಿರ್ಮತ್ಸರ ಮನದುದಾರ ಮಹಿಮೆಯೆ 

ನಿತ್ಯೋತ್ಸವ ತಾಯಿ ನಿತ್ಯೋತ್ಸವ

ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ .. ।।೨।।









Friday, April 22, 2022

Seereli Hudugeera Nodalebaradu (ಸೀರೇಲಿ ಹುಡ್ಗೀರ ನೋಡಲೆಬಾರದು)



  • Movie : Ranna (2015)
  • Singer: Vijay Prakash
  • Song link: Click Here


Seereli hudugeera nodalebaradu

Nillala temperature uu

Schoolali helikodbahudittu 

Hel lilla nam teacher uu

Nange answer ondu bekide

Seere transparent yakide?

Aadeste beda andru kannu

Kadkaddu nodnodtade

Adyako manasu monneyinda

Mudmuddu matadtade..


Nanna eradu kannu

Ottottge nagtidvu, ottottge alatidvu

Ottottge minchtidvallo

Sundari endige kandalo

Dostiya maretavu kangalo

Onde ondu sanna tappu maduovase

Ivalu oppikondare

Eanu punishmentu agabahudu omme

Kenne kachibittare

Puka puka puka

Yako puka puka

Adeste beda andru tolu

Tanage chachkontade

Adeste beku andru kissu

Postponu aghogtade,  tattharike ||


A...

Chenagittu jeevna

Ekdammu loveagi

edeyella kadagi

Roadella hoovaytalla

Girlfriend bandare balige

Future u tuppada holige

Churu kirikku agabardu preetiyalli

Novu adage agtade

Enu nadide idru mai kai novu

Yava mulamu sigtade

Mukha laka laka

Aha eno sukha

adeste beda andru night u

malgode late aagtade

adeste jaldi edru beligge

 Hannondu agirtade.. ||



ಚಿತ್ರಗೀತೆ 


ಸೀರೇಲಿ ಹುಡ್ಗೀರ ನೋಡಲೆಬಾರದು 

ನಿಲ್ಲಲ್ಲ ಟೆಂಪ್ರೆಚರು 

ಸ್ಕೂಲಲಿ ಹೇಳಿ ಕೊಡಬಹುದಿತ್ತು 

ಹೇಳ್ ಲಿಲ್ಲ ನಮ್ ಟೀಚರು 

ನಂಗೆ ಆನ್ಸರ್ ಒಂದು ಬೇಕಿದೆ 

ಸೀರೆ ಟ್ರಾನ್ಸ್ಪರೆಂಟು  ಯಾಕಿದೆ ?

ಅದೆಷ್ಟೇ ಬೇಡ ಅಂದ್ರು ಕಣ್ಣು 

ಕದ್ಕದ್ದು ನೋಡ್ ನೋಡ್ತದೆ 

ಅದ್ಯಾಕೋ ಮನ್ಸು ಮೊನ್ನೆಯಿಂದ 

ಮುದ್ದ್ ಮುದ್ದು ಮಾತಾಡ್ತದೆ ।।ಪ ।।


ನನ್ನ ಎರಡು ಕಣ್ಣು 

ಒಟ್ಟೊಟ್ಗೆ  ನಗ್ತಿದ್ವು 

ಒಟ್ಟೊಟ್ಗೆ  ಅಳ್  ತಿದ್ವು 

ಒಟ್ಟೊಟ್ಗೆ  ಮಿಂಚ್ ತಿದ್ವಲ್ಲೋ 

ಸುಂದರಿ ಎಂದಿಗೆ ಕಂಡಳೋ 

ದೋಸ್ತಿಯ ಮರೆತವು ಕಂಗಳೋ 

ಒಂದೇ ಒಂದು ಸಣ್ಣ ತಪ್ಪು ಮಾಡುವಾಸೆ 

ಇವಳು ಒಪ್ಪಿಕೊಂಡರೆ 

ಏನು ಪನಿಷಮೆಂಟ್ ಆಗಬಹುದು ಒಮ್ಮೆ 

ಕೆನ್ನೆ ಕಚ್ಚಿ ಬಿಟ್ಟರೆ 

ಪುಕ ಪುಕ ಪುಕ , ಯಾಕೋ ಪುಕ ಪುಕ 

ಅದೆಷ್ಟೆ  ಬೇಡ ಅಂದ್ರು ತೋಳು 

ತಾನಾಗೆ  ಚಾಚ್ ಕೊಂತದೆ 

ಅದೆಷ್ಟೆ ಬೇಕು ಅಂದ್ರು ಕಿಸ್ಸು 

ಪೋಸ್ಟ್ ಪೊನು ಆಗ್ ಹೋಗ್ತದೆ, ತತ್ತರಿಕೆ ।।೧।।


ಏ .. ಚೆನ್ನಾಗಿತ್ತು ಜೀವನ 

ಎಕ್ದಮ್ಮು ಲವ್ ಆಗಿ ಎದೆಯಲ್ಲ ಕಾದಾಗಿ 

ರೋಡೆಲ್ಲ ಹೂವ್ ಆಯ್ತಲ್ಲ 

ಗರ್ಲ್ ಫ್ರೆಂಡ್ ಬಂದರೆ ಬಾಳಿಗೆ 

ಫ್ಯೂಚರು ತುಪ್ಪದ ಹೋಳಿಗೆ 

ಚೂರು ಕಿರಿಕ್ಕು ಆಗಬಾರದು ಪ್ರೀತಿಯಲ್ಲಿ 

ನೋವು ಅದಾಗೇ ಆಗ್ತದೆ 

ಏನು ನಡೀದೆ ಇದ್ರು ಮೈ ಕೈ ನೋವು 

ಯಾವ ಮುಲಾಮು ಸಿಗ್ತದೆ 

ಮುಖ ಲಕ ಲಕ , ಆಹ ಏನೋ ಸುಖ 

ಅದೆಷ್ಟೆ ಬೇಡ ಅಂದ್ರು ನೈಟು 

ಮಲ್ಗೊದೆ ಲೇಟ್ ಆಗ್ತದೆ 

ಅದೆಷ್ಟೆ ಜಲ್ದಿ ಎದ್ರು ಬೆಳಿಗ್ಗೆ 

ಹನ್ನೊಂದು ಆಗಿರ್ತದೆ ।।೨।।



Taravalla Tagi Ninna Tamburi (ತರವಲ್ಲ ತಗಿ ನಿನ್ನ ತಂಬೂರಿ)


Shishunala shariefa Sahebara Geetegalu

Song link: Click Here


Taravalla tagi ninna tamburi -  swara

Barade barisadiru tamburi

Sarasa sangeetada kuruhugalariyade

Baride barisadiru tamburi ||


Maddali daniyolu tamburi -  ada

Tiddi nudisabeko tamburi

Sidda sadhakara suvidhyege odaguva

Bhudivantakke takka tamburi ||


Balaballavarige tamburi - deva

Balaksha rachisida tamburi

Helali enidara hanchike tiliyada

Talagedige salla tamburi ||


Satya sharadhiyolu tamburi - nitya

Uttamaraduva tamburi

Battisaragada bageyanariyadantha

Kattiginyatake tamburi ||taravalla||


Hasanada myalake tamburi - idu

Kushalarigoppuva tamburi

Sishunaladeeshana odupuranadi

Hasanagi bariso tamburi ||



ತತ್ವಪದ 


ತರವಲ್ಲ ತಗಿ ನಿನ್ನ ತಂಬೂರಿ - ಸ್ವರ 

ಬರದೆ  ಬಾರಿಸದಿರು ತಂಬೂರಿ

ಸರಸ ಸಂಗೀತದ ಕುರುಹುಗಳರಿಯದೆ 

ಬರದೆ  ಬಾರಿಸದಿರು ತಂಬೂರಿ ।।ಪ ।।


ಮದ್ದಲಿ ದನಿಯೊಳು ತಂಬೂರಿ - ಅದ 

ತಿದ್ದಿ ನುಡಿಸಬೇಕೊ  ತಂಬೂರಿ 

ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ 

ಬುದ್ಧಿವಂತಕೆ ತಕ್ಕ ತಂಬೂರಿ ।।೧।।


ಬಾಳ  ಬಲ್ಲವರಿಗೆ ತಂಬೂರಿ - ದೇವಾ 

ಭಾಳಾಕ್ಷ ರಚಿಸಿದ ತಂಬೂರಿ 

ಹೇಳಲಿ ಏನಿದರ ಹಂಚಿಕೆ ತಿಳಿಯದ 

ತಾಳಗೇಡಿಗೆ ಸಲ್ಲ ತಂಬೂರಿ ।।೨।।


ಸತ್ಯ ಶರಧಿಯೊಳು ತಂಬೂರಿ  - ನಿತ್ಯ 

ಉತ್ತಮರಡುವ ತಂಬೂರಿ 

ಬತ್ತೀಸರಾಗದ ಬಗೆಯನರಿಯದಂಥ 

ಕತ್ತಿಗಿನ್ಯಾತಕೆ ತಂಬೂರಿ ।।೩।।


ಹಸನಾದ ಮ್ಯಾಳಕೆ  ತಂಬೂರಿ - ಇದು 

ಕುಶಲರಿಗೊಪ್ಪುವ ತಂಬೂರಿ 

ಶಿಶುನಾಳಾಧೀಶನ ಓದುಪುರಾಣದಿ 

ಹಸನಾಗಿ ಬಾರಿಸೊ  ತಂಬೂರಿ ।।೪।।

                                                     





Sunday, April 17, 2022

Shane Top Agavle (ಶಾನೆ ಟಾಪ್ ಆಗ್ವಳೆ )


  • Movie: Singa (2019)
  • Singer: Vijay Prakash
  • Song link: Click Here



Parpanchane ondu round hako bandru

Inta cheluve sigakilla

Ivala anda varnisoke

Ondu janma salakilla

Shane top agavle 

Nam hudugi

Shane top agavle..


Muttu ratna havalanu mankene

Ivalu omme nakre

Doute illa shiva, doute illa shiva

Ivalu mandya sakkre 

Shane top agavle 

Nam hudugi

Shane top agavle..


Aa kadala mutthange ivalu

Maharani gatthange ivalu

Ivalanda noodoke kamanabillu bartaite

Kaveri birsene ivalu

Aa dasara sogasene ivalu

Matadalu neerinda meenu mele bartave

Ivala anda kandu, tale kedisikondu

Hudugur aagtare loose uu

Acche huisikondu ella jayisikondu

Nanu koduve ondu rose uu ||shane||


Dwani kelalu ugadi habba

Nakbutre sankranti ellu

Sumnidru pataki edeyali sididhang aaitaite

Beladingala holapene ivalu

Nore haalina bilupene ivalu

Bangara nachiso magalu

Kinnari kuladavalu

Mansu looti madi

Preeti nati maadi

Hagalu ratri kadtavle

Elladakku ready

Doute illa budi

Nanna hendru ivle ||shane||



ಚಿತ್ರಗೀತೆ 


ಪರಪಂಚಾನೇ ಒಂದು ರೌಂಡು 

ಹಾಕೊಂಡ್ ಬಂದ್ರು 

ಇಂತ ಚೆಲುವೆ ಸಿಗಕಿಲ್ಲ 

ಇವಳ ಅಂದ ವರ್ಣಿಸೋಕೆ 

ಒಂದು ಜನುಮ ಸಾಲಕಿಲ್ಲ 

ಶಾನೆ ಟಾಪ್ ಆಗ್ವಳೆ 

ನಮ್ ಹುಡುಗಿ 

ಶಾನೆ ಟಾಪ್ ಆಗ್ವಳೆ 


ಮುತ್ತು ರತ್ನ ಹವಳಾನು ಮಂಕೇನೇ 

ಇವಳು ಒಮ್ಮೆ ನಕ್ರೆ 

ದೌಟೆ ಇಲ್ಲ ಶಿವ, ದೌಟೆ ಇಲ್ಲ ಶಿವ

ಇವಳು ಮಂಡ್ಯ ಸಕ್ರೆ 

ಶಾನೆ ಟಾಪ್ ಆಗ್ವಳೆ 

ನಮ್ ಹುಡುಗಿ 

ಶಾನೆ ಟಾಪ್ ಆಗ್ವಳೆ 


ಆ ಕಡಲ ಮುತ್ತಂಗೆ ಇವಳು 

ಮಹಾರಾಣಿ ಗತ್ತಂಗೆ ಇವಳು

 ಇವಳಂದ ನೋಡೋಕೆ 

ಕಾಮನಬಿಲ್ಲು ಬರತೈತೆ 

ಕಾವೇರಿ ಬಿರ್ಸೆನೆ ಇವಳು 

ಆ ದಸರಾ ಸೊಗಸೇನೆ ಇವಳು 

ಮಾತಾಡಲು ನೀರಿಂದ ಮೀನು 

ಮೇಲೆ ಬರ್ತಾವೆ 

ಇವಳ ಅಂದ ಕಂಡು , ತಲೆ ಕೆಡಿಸಿಕೊಂಡು 

ಹುಡುಗೂರು ಆಗ್ತಾರೆ ಲೂಸು 

ಅಚ್ಚೆ ಹುಯ್ಸಿಕೊಂಡು ಎಲ್ಲ ಜಯಿಸಿಕೊಂಡು 

ನಾನು ಕೊಡುವೆ ಒಂದು ರೋಸು ।।ಶಾನೆ ।।


ಧ್ವನಿ ಕೇಳಲು ಉಗಾದಿ ಹಬ್ಬ 

ನಕ್ಬುಟ್ರೆ  ಸಂಕಾಂತ್ರಿ ಎಳ್ಳು 

ಸುಮ್ನಿದ್ರು ಪಟಾಕಿ ಎದೆಯಲಿ 

ಸಿಡಿದಂಗ್ ಆಗತೈತೆ 

ಬೆಳದಿಂಗಳ ಹೊಳಪೇನೆ ಇವಳು 

ನೊರೆ ಹಾಲಿನ ಬಿಳುಪೇನೆ ಇವಳು 

ಬಂಗಾರ ನಾಚಿಸೊ ಮಗಳು 

ಕಿನ್ನರಿ ಕುಲದವಳು 

ಮನ್ಸು ಲೂಟಿ ಮಾಡಿ 

ಪ್ರೀತಿ ನಾಟಿ ಮಾಡಿ 

ಹಗಲು ರಾತ್ರಿ ಕಾಡ್ತವಳೆ 

ಎಲ್ಲದಕ್ಕೂ ರೆಡಿ , ದೌಟೆ ಇಲ್ಲ ಬುಡಿ 

ನನ್ನ ಹೆಂಡ್ರು ಇವ್ ಳೆ ।।ಶಾನೆ ।।