Bhavgeete
Sahitya: G S Shivarudrappa
Houdene uma houdene.
Jnavennuvudidu nijvene?
Msnada budiyu mige balidu shiva
Ellello tiruguvnante!
Hotte battegu gatiyilladarolu
Ooruralu tiridumbuvannte!
Neenu kuda bangarada maiyige
a budiyane baliyuveyante.
Ninna taayi naanagiha tappige
Sahisabeke avamanavanu?
Mtte ninna shiva kareyalu barali
'maneyolilla ume'- ennuvenu.
ಭಾವಗೀತೆ
ಹೌದೇನೇ ಉಮಾ ಹೌದೇನೇ
ಜನವೆನ್ನುವುದಿದು ನಿಜವೇನೇ ?
ಮಸಣದ ಬೂದಿಯ ಮೈಗೆ ಬಳಿದು ಶಿವ
ಎಲ್ಲೆಲ್ಲೋ ತಿರುಗುವನಂತೆ !
ಹೊಟ್ಟೆ ಬಟ್ಟೆಗೂ ಗತಿಯಿಲ್ಲದರೊಲು
ಊರೂರಲು ತಿರಿದುಂಬುವನಂತೆ !
ನೀನು ಕೂಡ ಬಂಗಾರದ ಮೈಯಿಗೆ
ಆ ಬೂದಿಯನೇ ಬಳಿಯುವೆಯಂತೆ.
ನಿನ್ನ ತಾಯಿ ನಾನಾಗಿಹ ತಪ್ಪಿಗೆ
ಸಹಿಸಬೇಕೆ ಅವಮಾನವನು ?
ಮತ್ತೆ ನಿನ್ನ ಶಿವ ಕರೆಯಲು ಬರಲಿ
'ಮನೆಯೊಳಿಲ್ಲ ಉಮೆ'-ಎನ್ನುವೆನು.


