Sunday, August 28, 2022

Sarale Varasegalu -4 (ಸರಳೇ ವರಸೆಗಳು -೪)

 

Raga : Mayamalavagowla

Tala   : Aditala



4) S R G S | R G | S R || S R G M | P D | N S' ||

    S' N D S' | N' D | S' N || S' N D P | M G | R S||


ರಾಗ : ಮಾಯಾಮಾಳವಗೌಳ 

ತಾಳ :ಆದಿತಾಳ   


೪)

ಸ ರಿ ಗ ಸ । ರಿ ಗ । ಸ ರಿ ।। ಸ ರಿ ಗ ಮ। ಪ ದ । ನಿ ಸ'।।

ಸ'ನಿ ದ ಸ' । ನಿ' ದ। ಸ' ನಿ ।। ಸ' ನಿ ದ ಪ ।ಮ ಗ ।ರಿ ಸ ।।



Monday, August 22, 2022

Molada Mari (ಮೊಲದ ಮರಿ)

Padya

Sahitya: Kemturu Doddanna Shetti

Song link: Click Here


Molada mari molada mari

Aada baare

Chupuke chupuke chupuke chupuke

Negedu baare


Podarininda podara balige

Ninna aata

Gidada chiguru nitya ninage

Sogasinuta


Gidda bala dodda kiviyu

Ninage chanda

Eddu enna balige bandu

Aado kanda


Muddu muddu matugalanu

Ninage kalisuve

Muddu madi preetiyinda

Ninna salahuve


ಪದ್ಯ 


ಮೊಲದ ಮರಿ ಮೊಲದ ಮರಿ 

ಆಡ ಬಾರೆ 

ಚೂಪುಕೆ ಚೂಪುಕೆ ಚೂಪುಕೆ ಚೂಪುಕೆ 

ನೆಗೆದು ಬಾರೆ 


ಪೊದರಿನಿಂದ ಪೊದರ ಬಳಿಗೆ 

ನಿನ್ನ ಆಟ 

ಗಿಡದ ಚಿಗುರು ನಿತ್ಯ ನಿನಗೆ 

ಸೊಗಸಿನೂಟ 


ಗಿಡ್ಡ ಬಾಲ ದೊಡ್ಡ ಕಿವಿಯು 

ನಿನಗೆ ಚಂದ 

ಎದ್ದು ಎನ್ನ ಬಳಿಗೆ ಬಂದು 

ಆಡೊ ಕಂದಾ 


ಮುದ್ದು ಮುದ್ದು ಮಾತುಗಳನು 

ನಿನಗೆ ಕಲಿಸುವೇ 

ಮುದ್ದು ಮಾಡಿ ಪ್ರೀತಿಯಿಂದ 

ನಿನ್ನ ಸಲಹುವೇ . 

           

Sunday, August 21, 2022

Chandiranetake Oduvanamma (ಚಂದಿರನೇತಕೆ ಓಡುವನಮ್ಮ )

Padya

Sahitya: Ne Re Hiremat

Song link: Click Here


Chandiranetake oduvanamma

Modake hedarihane


Belliya modada alegala kandu

Chandira bedarihane


Hingida araleyu galige haari

Modagalagihave


Araleyu mutti maiyanu sutti

Chandrana bigiyuvave?


Mangina gaddeya modavu karagalu

Chandira nagutihanu


Karagida modada sereyanu hariyuta

Banali teluvanu


Chandiranenneya geleyanu, amma

Nannodanaduvanu


Nanu odalu tanu oduva

Chenniga chandiranu


Ba ba chandira, belliya chandira

Nammaya manegeega


Nennaya belakanu ellede chelli

Manavanu belageega.


ಪದ್ಯ 


ಚಂದಿರನೇತಕೆ ಓಡುವನಮ್ಮ 

ಮೋಡಕೆ ಹೆದರಿಹನೇ 


ಬೆಳ್ಳಿಯ ಮೋಡದ ಅಲೆಗಳ ಕಂಡು 

ಚಂದಿರ ಬೆದರಿಹನೇ 


ಹಿಂಜಿದ ಅರಳೆಯು ಗಾಳಿಗೆ ಹಾರಿ 

ಮೋಡಗಳಾಗಿಹವೇ 


ಅರಳೆಯು ಮುತ್ತಿ ಮೈಯನು ಸುತ್ತಿ 

ಚಂದ್ರನ ಬಿಗಿಯುವವೆ ?


ಮಂಜಿನ ಗಡ್ಡೆಯ ಮೋಡವು ಕರಗಲು 

ಚಂದಿರ ನಗುತಿಹನು 


ಕರಗಿದ ಮೋಡದ ಸೆರೆಯನು ಹರಿಯುತ 

ಬಾನಲಿ ತೇಲುವನು 


ಚಂದಿರನೆನ್ನೆಯ ಗೆಳೆಯನು 

ಅಮ್ಮಾ ನನ್ನೊಡನಾಡುವನು 


ನಾನೂ ಓಡಲು ತಾನೂ ಓಡುವ 

ಚೆನ್ನಿಗ ಚಂದಿರನು 


ಬಾ ಬಾ ಚಂದಿರ ಬೆಳ್ಳಿಯ ಚಂದಿರ 

ನಮ್ಮಯ ಮನೆಗೀಗ 


ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ 

ಮನವನು ಬೆಳಗೀಗ . 

                 

Saturday, August 20, 2022

Tarakka Bindige Na Neerighoguve (ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ)

Bhaktigeete

Purandara Dasara Keerthanegalu

Song link: Click Here



Raga: Sourastra

Tala: Chaputala


Tarakka bindige na neerighoguve

Tare bindigeya

Bindige odedare onde kasu

Tare bindigeya


Rama namavembo rasavulla neerige

Tare bindigeya

Kaminiyara koode ekanta vadenu

Tare bindigeya ||tarakka||


Govinda embo gunavulla neerige

Tare bindigeya

Avava pariyai amrutada panake

Tare bindigeya ||tarakka||


Bindu madhavana ghattakke hoguve

Tare bindigeya

Purandara vittalage abhisheka maduve

Tare bindigeya ||tarakka||


ಭಕ್ತಿಗೀತೆ 


ತಾರಕ್ಕ ಬಿಂದಿಗೆ ನಾ ನೀರಿಗ್ಹೋಗುವೆ 

ತಾರೇ ಬಿಂದಿಗೆಯ 

ಬಿಂದಿಗೆ ಒಡೆದರೆ ಒಂದೇ ಕಾಸು 

ತಾರೇ ಬಿಂದಿಗೆಯ ।।ಪ ।।


ರಾಮನಾಮವೆಂಬೊ ರಸವುಳ್ಳ ನೀರಿಗೆ 

ತಾರೇ ಬಿಂದಿಗೆಯ

ಕಾಮಿನಿಯರ ಕೂಡೆ ಏಕಾಂತ ವಾಡೇನು 

ತಾರೇ ಬಿಂದಿಗೆಯ ।।೧।।


ಗೋವಿಂದ ಎಂಬೋ ಗುಣವುಳ್ಳ ನೀರಿಗೆ 

ತಾರೇ ಬಿಂದಿಗೆಯ

ಆವಾವ ಪರಿಯಲಿ ಅಮೃತದ ಪಾನಕೆ 

ತಾರೇ ಬಿಂದಿಗೆಯ ।।೨।।


ಬಿಂದು ಮಾಧವನ ಘಟ್ಟಕ್ಕೆ ಹೋಗುವೆ 

ತಾರೇ ಬಿಂದಿಗೆಯ

ಪುರಂದರ ವಿಠ್ಠಲಗೆ ಅಭಿಷೇಕ ಮಾಡುವೆ 

ತಾರೇ ಬಿಂದಿಗೆಯ ।।೩।।                               ಶ್ರೀ 





 

Friday, August 19, 2022

Gaganadi Sagive Bagive Moda (ಗಗನದಿ ಸಾಗಿವೆ, ಬಾಗಿವೆ ಮೋಡ )


Bhavageete

Sahitya: Chennaveera Kanavi


Gaganadi sagive, bagive moda

Hoguve neeranu suridu

Baruvavu,bande baruvavu noda

Tumbisi tulukisi haridu


Ilegu banigu male jokali

Tugide, tangide cheluvu

Hasure habbide, hasure tabbide

Hesarigu kanadu nelavu 


Besage bana bana, chaligo ona ona

Shravana tannage naduve

Ellide benki? ellide belaku?

Beesuva galige biduve?


Becchage olage, haccage horage

Huccanu bidiside maleyu

Ecchara ecchara ennuta haridide

Tumbide balina holeyu


ಭಾವಗೀತೆ 


ಗಗನದಿ ಸಾಗಿವೆ, ಬಾಗಿವೆ ಮೋಡ 

ಹೋಗುವೆ ನೀರನು ಸುರಿದು 

ಬರುವವವು , ಬಂದೇ ಬರುವವು ನೋಡ 

ತುಂಬಿಸಿ , ತುಳುಕಿಸಿ ಹರಿದು 


ಇಳೆಗೂ ಬಾನಿಗೂ ಮಳೆ ಜೋಕಾಲಿ 

ತೂಗಿದೆ , ತಂಗಿದೆ ಚೆಲುವು 

ಹಸುರೇ ಹಬ್ಬಿದೆ , ಹಸುರೇ  ತಬ್ಬಿದೆ 

ಹೆಸರಿಗು ಕಾಣದು ನೆಲವು ।।೧।।


ಬೇಸಿಗೆ ಬಣ ಬಣ , ಚಳಿಗೋ ಒಣ ಒಣ 

ಶ್ರಾವಣ ತಣ್ಣಗೆ ನಡುವೆ 

ಎಲ್ಲಿದೆ ಬೆಂಕಿ ? ಎಲ್ಲಿದೆ ಬೆಳಕು ?

ಬೀಸುವ ಗಾಳಿಗೆ ಬಿಡುವೆ ? ।।೨।।


ಬೆಚ್ಚಗೆ ಒಳಗೆ , ಹಚ್ಚಗೆ ಹೊರಗೆ 

ಹುಚ್ಚನು ಬಿಡಿಸಿದೆ ಮಳೆಯು 

ಎಚ್ಚರ ಎಚ್ಚರ ಎನ್ನುತ ಹರಿದಿದೆ 

ತುಂಬಿದೆ ಬಾಳಿನ ಹೊಳೆಯು ।।೩।।



Thursday, August 18, 2022

Kannada Ulisi Kannada Belesi Kannadavane balasi (ಕನ್ನಡ ಉಳಿಸಿ ಕನ್ನಡ ಬೆಳೆಸಿ ಕನ್ನಡವನೆ ಬಳಸಿ )


Nadageete

Sahitya: Pu Ti Narasimhachar

Song link: Click Here



Kannada ulisi kannada belesi

Kannadavane balasi


Enu kugidu yavara huyilu

Yavara gadde Yavara kuyilu

Eegi nadanu aluvararu

Eegi neladolu baluvararu


Nade nudiyu nudiye nadu

Swatantra deshake beravudu hadu

Kannadaketake heranudiyojje

Hesuvude nudigiliyalu bijje ||kannada||


Kannada janarallade kannadavanu

Ulisuvararai belesuvararai

Balasuvaru tavariharai

Aadode - tolagade namma vilayatike

Kannadakentai pannatike? ||kannada||


ನಾಡಗೀತೆ 


ಕನ್ನಡ ಉಳಿಸಿ ಕನ್ನಡ ಬೆಳೆಸಿ 

ಕನ್ನಡವನೆ ಬಳಸಿ 


ಯಾವರ ಕೂಗಿದು ಯಾವರ ಹುಯಿಲು 

ಯಾವರ ಗದ್ದೆ ಯಾವರ ಕುಯಿಲು 

ಈಗೀ ನಾಡನು ಅಳುವರಾರು 

ಈಗೀ  ನೆಲದೊಳು ಬಾಳುವರಾರು 


ನಾಡೇ ನುಡಿಯು ನುಡಿಯೇ ನಾಡು 

ಸ್ವತಂತ್ರ ದೇಶಕೆ ಬೇರಾವುದು ಹಾಡು 

ಕನ್ನಡಕೇತಕೆ ಹೆರನುಡಿಯೊಜ್ಜೆ

ಹೇಸುವುದೇ  ನುಡಿಗಿಳಿಯಲು ಬಿಜ್ಜೆ ।।೧।।


ಕನ್ನಡ ಜನರಲ್ಲದೆ ಕನ್ನಡವನು 

ಉಳಿಸುವರಾರೈ ಬೆಳೆಸುವರಾರೈ 

ಬಳಸುವರೂ ತಾವಾರಿಹರೈ 

ಆದೊಡೆ - ತೊಲಗದೆ ನಮ್ಮ ವಿಲಾಯತಿಕೆ 

ಕನ್ನಡ ಕೆಂತೈ ಪನ್ನತಿಕೆ ? ।।೨।।



Monday, August 15, 2022

Hattu Hattu Ippattu (ಹತ್ತು ಹತ್ತು ಇಪ್ಪತ್ತು )

 

Padya

Song link: Click Here


Hattu hattu ippattu

Totake hodanu sampattu

Ippattu hattu muvattu

Kaiyali ondu kallittu

Muvattu hattu nalvattu

Edurige mavina maravittu

Nalvattu hattu ivattu

Maradali kayiyu tumbittu

Ivattu hattu aravattu

Kallanu beerida sampattu

Aravattu hattu epattu

Kayu tapa tapa udurittu

Epattu hattu embattu

Maliya kandanu sampattu

Embattu hattu tombattu

Kalugaleradu nadugittu

Tombattu hattu nooru

Maneyanu talupida sampattu


ಪದ್ಯ 


ಹತ್ತು ಹತ್ತು ಇಪ್ಪತ್ತು 

ತೋಟಕೆ ಹೋದನು ಸಂಪತ್ತು 

ಇಪತ್ತು ಹತ್ತು ಮೂವತ್ತು 

ಕೈಯಲಿ ಒಂದು ಕಲ್ಲಿತ್ತು 

ಮೂವತ್ತು ಹತ್ತು ನಲವತ್ತು 

ಎದುರಿಗೆ ಮಾವಿನ ಮರವಿತ್ತು 

ನಲವತ್ತು ಹತ್ತು ಐವತ್ತು 

ಮರದಲಿ ಕಾಯಿಯು ತುಂಬಿತ್ತು 

ಐವತ್ತು ಹತ್ತು ಅರವತ್ತು 

ಕಲ್ಲನು ಬೀರಿದ ಸಂಪತ್ತು 

ಅರವತ್ತು ಹತ್ತು ಎಪತ್ತು 

ಕಾಯಿಯು ತಪ ತಪ ಉದುರಿತ್ತು 

ಎಪತ್ತು ಹತ್ತು ಎಂಬತ್ತು 

ಮಾಲಿಯ ಕಂಡನು ಸಂಪತ್ತು 

ಎಂಬತ್ತು ಹತ್ತು ತೊಂಬತ್ತು 

ಕಾಲುಗಳೆರಡು ನಡುಗಿತ್ತು 

ತೊಂಬತ್ತು ಹತ್ತು ನೂರು 

ಮನೆಯನು ತಲುಪಿದ ಸಂಪತ್ತು .