Movie: Robert (2021)
Singer: Shreya Ghoshal
Song link: Click HereKannu hodiyaka, monne kalatani
Neena helale magana
Ninna nodi summanhengirli?
Ninna nodi summanhengirli?
Bella kadiyaka, ninne kalatani
Galla chachale magana
Ninna nodi summanhengirli?
Ninna nodi summanhengirli?
Baala love maadeni hengara tadakalli
Helade na hengirli?
Nooru makkalu beku fifty ningirrli
En fifty nangirrli
Jara argent iti, rotti jari tuppaka beeli ||ninna||
Siri siri mandara, nanna mudiyali edu baara
Nintu doora nagabyada nanna nodi
Sarasada saradara tuti sakkari kadibara
Yaka koluti savi muttige tadamaadi
Egadi jaldi cheligala barali
Ninnusirina bisigali sigali
Hididu tabbkontini publicnyaga agid agli ||
Summaka eruvollae, sari hottige unavollae
Hucchu hididu aageti shatamana
Vili vili oddata, tali dimbige muddata
Nanna myala bedsheetigun anumana
Ontitanaka shatibyani barali
Ee virahaka parihara sigali
Jaldi helale magana byg etikondu ellige barli ||
ಚಿತ್ರಗೀತೆ
ಕಣ್ಣು ಹೊಡಿಯಾಕ, ಮೊನ್ನೆ ಕಲತಾನಿ
ನೀನಾ ಹೇಳಲೇ ಮಗನಾ
ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?
ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?
ಬೆಲ್ಲಾ ಕಡಿಯಾಕ, ನಿನ್ನೆ ಕಲತಾನಿ
ಗಲ್ಲಾ ಚಾಚಲೇ ಮಗನಾ
ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?
ನಿನ್ನಾ ನೋಡಿ ಸುಮ್ನ್ ಹೆಂಗಿರ್ಲಿ ?
ಬಾಳ ಲವ್ ಮಾಡೇನಿ ಹೆಂಗರ ತಡಕಳ್ಳಿ
ಹೇಳದೆ ನಾ ಹೆಂಗಿರ್ಲಿ ?
ನೂರು ಮಕ್ಕಳು ಬೇಕು ಫಿಫ್ಟಿ ನಿಂಗಿರ್ಲಿ
ಇನ್ ಫಿಫ್ಟಿ ನಂಗಿರ್ಲಿ
ಜರ ಅರ್ಜೆಂಟ್ ಐತಿ, ರೊಟ್ಟಿ ಜಾರಿ ತುಪ್ಪಕ ಬೀಳ್ ಲಿ
।।ನಿನ್ನಾ ।।
ಸಿರಿ ಸಿರಿ ಮಂದಾರ, ನನ್ನ ಮುಡಿಯಲಿ ಇಡು ಬಾರ
ನಿಂತೂ ದೂರ ನಗಬ್ಯಾಡ ನನ ನೋಡಿ
ಸರಸದ ಸರದಾರ ತುಟಿ ಸಕ್ಕರಿ ಕದಿ ಬಾರ
ಯಾಕ ಕೊಲುತಿ ಸವಿ ಮುತ್ತಿಗೆ ತಡ ಮಾಡಿ
ಅಗದಿ ಜಲ್ದಿ ಚಳಿಗಾಲ ಬರಲಿ, ನಿನ್ನುಸಿರಿನ ಬಿಸಿಗಾಳಿ ಸಿಗಲಿ
ಹಿಡಿದು ತಬ್ಕೊಂತಿನಿ ಪಬ್ಲಿಕ್ಕಿನ್ಯಾಗ
ಆಗಿದ್ದ್ ಆಗ್ಲಿ ।।ನಿನ್ನಾ ।।
ಸುಮ್ಮಕ ಇರುವೊಲ್ಲೆ, ಸರಿ ಹೊತ್ತಿಗೆ ಉಣವೊಲ್ಲೇ
ಹುಚ್ಚು ಹಿಡಿದು ಆಗೇತಿ ಶತಮಾನ
ವಿಲಿವಿಲಿ ಒದ್ದಾಟ, ತಲಿ ದಿಂಬಿಗೆ ಮುದ್ದಾಟ
ನನ್ನ ಮ್ಯಾಲ ಬೆಡ್ ಶೀಟಿಗೂ ಅನುಮಾನ
ಒಂಟಿ ತನಕ ಶತಿ ಬ್ಯಾನಿ ಬರಲಿ
ಈ ವಿರಹಕ ಪರಿಹಾರ ಸಿಗಲಿ
ಜಲ್ದಿ ಹೇಳಲೇ ಮಗನಾ ಬ್ಯಾಗ್ ಎತ್ತಿಕೊಂಡು
ಎಲ್ಲಿಗೆ ಬರ್ಲಿ ? ।।ನಿನ್ನಾ ।।
No comments:
Post a Comment